About The Song
| Track Name | Shuruvaagide |
| Album | Sakath |
| Vocals | Sid Sriram |
| Songwriter | Arjun Luis |
| Music | Judah Sandhy |
| Music-Label | Anand Audio |
ಮಾತಿನ ಈಟಿಯ ಬೀಸಿ
ಲಾಠಿನು ಕಣ್ಣಲ್ಲೇ ಉರಿಸಿ
ಬೇಟೆಗೆ ಬಂದಳು ರೂಪಸಿ
ಇಕೆಯ ಕೈಯಿಂದ ಉಳಿಸಿ
ಕುಂಚವೇ ಸೋಲುವ ಚೆಂದ
ಕೊಂಚವು ಮೀರದ ಅಂದ
ಸಂಪಿಗೆ ತೀಡಿದ ಗಂದ
ಮೇನಕೆ ಹೆತ್ತಿರೋ ಕಂದ
ಒಲವಿನ ಅಲೆಗಳು ಎದೆಯ ಮೀಟಿ
ಹುಡುಗನ ಮನಸೇ ಲೂಟಿ
ಶುರುವಾಗಿದೆ
ಸಿಹಿ ಕಂಪನ
ನರ ನಾಡಿಲು ನಿನ್ನ ರಿಂಗಣ
ಮಾತಾಲೆ ಸಕ್ಕರೆ ಪಾಕ
ಕೇಳುತ ಜೀವನ ಮೂಕ
ನಗುವಲಿ ಮೋಹಕ ಶಾಖಾ
ದಾಟಿಸಿ ಸೆಳೆದಳು ಲೋಕ.
ಒಳ ಬೇಗುದಿ ನಿನ್ನದೇ ಸಖಿ
ತುಸು ಕೂತು ಕೇಳು ನೀ ಗೋಳು
ಮನ ದಾಹಕೆ ಹೊಸ ಶಾಯಿರಿ
ಪಿಸು ಮಾತು ಮಾತಲ್ಲೇ ಕೇಳು
ನಡೆದಳು ಒಲವಿನ ಅಪ್ಸರೆ ಗೀಚಿ
ಹುಡುಗನ ಮನಸು ದೋಚಿ
ಶಿಲಾಪಾಲಿಕೆ
ಉಸಿರಾಡಿದೆ
ಎದೆ ಮಾಳಿಗೆ
ಉಸಿರಾಡಿದೆ
ಎದೆ ಗೂಡಲಿ ನಿನ್ನದೇ ದನಿ
ಗುನುಗುತ್ತಾ ಪ್ರೀತಿಯ ಹಾಡು
ನಡೆದಾಡುವ ಚೆಲುವ ಗಣಿ
ದಯಮಾಡಿ ಈಕಡೆ ನೋಡು
ಕಚಗುಳಿ ಇಡುತಿದೆ ಗೆಜ್ಜೆ ಗಲ್ಲು
ಹೊರಡಿದೆ ಒಲವ ಗುಲ್ಲು
ಶುರುವಾಗಿದೆ
ಸಿಹಿ ಕಂಪನ
ನರನಾಡಿಲು
ನಿನ್ನ ರಿಂಗಣ