Singara Siriye Lyrics from Kantara is latest Kannada song sung by Vijay Prakash, Ananya Bhat with music also given by B Ajaneesh Lokhnath. Singara Siriye song lyrics are written by Pramod Maravanthe.
About This Song
| Track Name | Singara Siriye |
| Album | Kantara |
| Vocals | Vijay Prakash, Ananya Bhat |
| Songwriter | Pramod Maravante |
| Music | B Ajaneesh Lokhnath |
| Music-Label | Hombale Films |
Singara Siriye Lyrics in Kannada
ಬತ್ತಾತೊಳು ಕೈಗೆ ಮಡಿ ಉಳೆಸಿದ
ಮದ್ವಿ ಹೋದಣ್ಣ ಬರಲಿಲ್ಲ
ಮದ್ವಿ ಹೋದಣ್ಣ ಬರಲಿಲ್ಲ ಬಸರೂರ
ಹೂವ ಗಂಟನ್ನ ತೆಗೆದೀಡ
ಏ ಸಿಂಗಾರ ಸಿರಿಯೇ
ಅಂಗಾಲಿನಲೇ ಬಂಗಾರ ಆಗೆ ಬಾ ಮಾಯೇ
ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸು ಛಾಯೇ
ಮಂದಹಾಸಾ ಆಹಾ
ನಲುಮೆಯಾ ಶ್ರಾವಣ ಮಾಸಾ
ಮುದ್ದಾದ ಮಾಯಾಂಗೆ
ಮೌನದ ಸಾರಂಗೆ
ಮೋಹದ ಮದರಂಗೆ
ನನ್ನ ಹಾಕಿದೆ ಮುಂಗುರುಳ ಸೋಕೆ
ಮಾತಾಡುವಾ ಮಂದಾರವೇ
ಕಂಗೊಳಿಸಬೇಡಾ ಹೇಳದೇ
ನಾನೇತಕೆ ನಿನಗ್ಹೇಳಲಿ
ನಿನ್ನ ಮೈಯ ತುಂಬಾ ಕಣ್ಣಿದೆ
ಮನದಾಳದ ರಸ ಮಂಚದೀ
ರಂಗೇರಿ ನಿನ್ನ ಕಾದಿದೆ
ಪಿಸುಮಾತಿನ ಪಂದ್ಯಾವಳಿ
ಆಕಾಶವಾಣಿ ಆಗಿದೆ
ಸಂಜೆಯ ಕೆನ್ನೆಯ ಮೇಲೆ
ಬಂದು ನಾಟಿದೆ ನಾಚಿಕೆ ಮುಳ್ಳು
ಮನದಾ ಮಗು ಹಠಮಾಡಿದೆ
ಮಾಡುಬಾ ಕೊಂಗಾಟವಾ
ಕಣ್ಣಿಗೆ ಕಾಣೋ ಹೂಗಳೆಲ್ಲ
ಏನೋ ಕೇಳುತಿವೆ
ನಿನ್ನಯಾ ನೆರಳ ಮೇಲೆ ನೂರು
ಚಾಡಿ ಹೇಳುತಿವೆ
ಏ ಸಿಂಗಾರ ಸಿರಿಯೇ
ಅಂಗಾಲಿನಲೇ ಬಂಗಾರ ಆಗೆ ಬಾ ಮಾಯೇ
ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸು ಛಾಯೇ
ಶೃಂಗಾರದ ಸೋಬಾನೆಯ
ಕಣ್ಣಾರೆ ನೀನು ಹಾಡಿದೆ
ಈ ಹಾಡಿಗೆ ಕುಣಿದಾಡುವ
ಸಾಹಸವ ಯಾಕೆ ಮಾಡುವೆ
ಸೌಗಂಧದ ಸುಳಿಯಾಗಿ ನೀ
ನನ್ನೆದೆಗೆ ಬೇಲಿ ಹಾಕಿದೆ
ನಾ ಕಾಣುವಾ ಕನಸಲ್ಲಿಯೇ
ನೀನ್ಯಾಕೆ ಬೇಲಿ ಹಾರುವೆ
ಸಂಜೆಯ ಕೆನ್ನೆಯ ಮೇಲೆ
ಬಂದು ನಾಟಿದೆ ನಾಚಿಕೆ ಮುಳ್ಳು
ಮನದಾ ಮಗು ಹಠಮಾಡಿದೆ
ಮಾಡುಬಾ ಕೊಂಗಾಟವಾ
ಸುಂದರವಾದ ಸೋಜಿಗವೆಲ್ಲಾ
ಕಣ್ಣಾ ಮುಂದೆ ಇದೆ
ಬಣ್ಣಿಸಬಂದಾ ರೂಪಕವೆಲ್ಲಾ
ತಾನೇ ಸೋಲುತಿದೆ
ಏ ಮಂದಹಾಸಾ ಆಹಾ
ನಲುಮೆಯಾ ಶ್ರಾವಣ ಮಾಸಾ