Naanadada Maathellava Lyrics is a latest Kannada song from the movie Gaalipata 2, featuring Golden Star Ganesh, Diganth and, Pawan Kumar. Sonu Nigam has sung this latest Kannada Song, while Naanadada Maathellava Song Lyrics has been penned down by Jayant Kaikini. Arjun Janya has composed the music and the movie is directed by Yogaraj Bhat.
About This Song
| Track Name | Naanadada Maathellava |
| Album | Gaalipata 2 |
| Vocals | Sonu Nigam |
| Songwriter | Jayant Kaikini |
| Music | Arjun Janya |
| Music-Label | Anand Audio |
Naanadada Maathellava Lyrics in Kannada
ನಾನಾಡದ ಮಾತೆಲ್ಲವ ಕದ್ದಾಲಿಸು
ಆದರು ನೀ ಹೇಳದೆ ಒದ್ದಾಡಿಸು
ನೀ ತೋರುವ ಮುಂಗೋಪವ ಮುದ್ದಾಗಿಸು
ಕಣ್ಣಲೆ ನೀ ಮೆಲ್ಲಗೆ ಒತ್ತಾಯಿಸು
ಓದದ ಪುಸ್ತಕ ನಾನು
ಎದೆಗೊತ್ತಿಕೊಳ್ಳುವೆ ಏನು?
ಬಿಸಿಯ ಉಸಿರು ನೀಡಿ
ಪ್ರತಿ ಸಾಲನು ಕಥೆಯಾಗಿಸು
ನಾನಾಡದ ಮಾತೆಲ್ಲವ ಕದ್ದಾಲಿಸು
ಆದರು ನೀ ಹೇಳದೆ ಒದ್ದಾಡಿಸು
ಮಧುರ ಮನಸಿನ ಕದ
ತೆರೆದೇ ಇಡುವೇನು ಸದಾ
ಒಂಟಿ ನಾನಾದರೂ ಸಂಭಾವಿತ
ಸರಳ ಸಂಗತಿಯಲಿ ಸಲಿಗೆ ಸಂಭವಿಸಲಿ
ಜಂಟಿ ಅಭ್ಯಾಸಕೆ ಸುಸ್ವಾಗತ
ತೆರೆಯ.. ಮರೆಯ..
ವಿಷಯ ತುಂಬಾ ಇದೆ
ಕೃಪಯ ಹಿಂಬಾಲಿಸು
ನಿನ್ನ ಸೆಳೆತದ ಸವಿ
ಬರೆಯಲಾರನು ಕವಿ
ಮನದಿ ಬರಿ ನಿನ್ನದೇ
ಚಿತ್ರೋತ್ಸವ..
ಪಂಚನಾಮೆಯ ಬಿಡು
ಪ್ರಥಮ ಚಿಕಿತ್ಸೆಯ ಕೊಡು
ಮಾಡಿ ಸದ್ದಿಲದ ಅಪಘಾತವ
ಉಭಯ.. ಹೃದಯ..
ಅದಲು ಬದಲಾದರೆ
ನೀನೇನೆ ಸಂಭಾವಿಸು
ನಾನಾಡದ ಮಾತೆಲ್ಲವ ಕದ್ದಾಲಿಸು
ಆದರು ನೀ ಹೇಳದೆ ಒದ್ದಾಡಿಸು
ನೀ ತೋರುವ ಮುಂಗೋಪವ ಮುದ್ದಾಗಿಸು
ಕಣ್ಣಲೆ ನೀ ಮೆಲ್ಲಗೆ ಒತ್ತಾಯಿಸು