Maaya Gange Song lyrics is brand new kannada song from kannada movie Banaras starring Zaid Khan, Sonal Monteiro. This Maaya Gange lyrics written by Dr. V. Nagendra Prasad and sung by Armaan Malik while music composed by B.Ajaaeesh Loknath.
About This Song
| Track Name | Maayagange |
| Album | Banaras |
| Vocals | Arman Mallik |
| Songwriter | Dr V Nagendra Prasad |
| Music | B Ajaneesh Loknath |
| Music-Label | Lahari music |
Mayagange kannada lyrics
ಮಾಯಗಂಗೆ ಮಾಯಗಂಗೆ ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ..
ನಾನೇ ಗಂಗೆಯೋ ನನ್ನ ಒಳಗೆ ಗಂಗೆಯೋ
ಅನ್ನೋ ಸಂಶಯ ಮೂಡಿದೆ ಈಗ
ದೇವರೂರಿಗೆ ನಾನೇ ದಾರಿ ಹೋಕನಾ
ಅನ್ನೋ ಅಚ್ಚರಿ ಮೂಡಿಸೋ ಯೋಗ
ಪುಟ್ಟ ದೋಣಿ ಒಂದ್ದು ಸುಳಿಗೆ ಸಿಕ್ಕಕೊಂಡ ಹಾಗಿದೆ
ಇಂಥದೊಂದು ದಾಳಿಯನ್ನು ಜೀವ ತಾಳಬಲ್ಲದೆ
ಹೋ…
ಮಾಯಗಂಗೆ ಮಾಯಗಂಗೆ ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ..
ಆ ಬಾನೆತ್ತರ ಈ ಗೋಪುರ ವಾಲೊತರ
ಹಾ ಏಳು ಸ್ವರ ಈ ಪಾಮರ ಕೇಳೋ ತರ
ಏ ಏ ನಾನೀಗ ಅವಳ ಹೆಜ್ಜೇನ ನೋಡೋ ತರ
ಸಾಗಿದೆ ಈ ಪಾದ ಹೋಗೋ ಗುರಿನೇ ಕಾಣದೆ
ದಟ್ಟ ಬೆಳಕಲ್ಲಿ ಎಲ್ಲ ಕಟ್ಟಲಾಗಿದೆ ನೀನು ಹೇಳಿದೆ ಡೊಂಕಿನ ದಾರಿ
ಹುಟ್ಟಬೇಕಿದೆ ಹುಟ್ಟಬೇಕಿದೆ ಪ್ರೀತಿ ಮಾಡಲು ಸೀಳುತ ಗೋರಿ
ಮಾಯಗಂಗೆ ಮಾಯಗಂಗೆ ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ..
ಈ ಗೂಡಂಗಡಿ ಚಹಾ ಪುಡಿ ಮಾತಾಡಿದೆ
ಹೇ ಏನಾಯಿತು ಹೇಗಾಯಿತು ಹೇಳ್ ಎಂದಿದೆ
ಹೇ..ಆ ಕಣ್ಣ ಒಳಗೆ ನಕ್ಷತ್ರ ಮಂಡಳಿ
ಮಾತಲಿ ನಾ ಹೇಗೆ ಅವಳ ವಿಚಾರ ಹೇಳಲಿ
ತುಂಬಾ ಜಂಗುಳಿ ಇಲ್ಲಿ ಭಸ್ಮದೋಕುಳಿ
ನಾನು ಮೈಲಿಗೆ ಆಗದ ಆತ್ಮ
ಹರಿಯುತಿರುವೆನು ಹೇಗೆ ನಿಂತುಕೊಳ್ಳಲಿ
ನನ್ನ ಮುಂದಿನ ಪೂಜೆಯೇ ಪ್ರೇಮ
ಮಾಯಗಂಗೆ ಮಾಯಗಂಗೆ ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ..