Prayashaha Song Lyrics - Galipata 2 - Golden Star Ganesh

 



Prayashaha song lyrics from Galipata 2 sung by Sonu Nigam and written by Yogaraj Bhat and composed by Arjun Janya. Prayashaha is a brand new track featuring Golden Star Ganesh.
About This Song
Track Name Prayashaha
Album Galipata 2
Vocals Sonu Nigam
Songwriter Yogaraj Bhat
Music Arjun Janya
Music-Label Anand Audio

Prayashaha Kannada Lyrics
ನಾವು ಬದುಕಿರಬಹುದು
ಪ್ರಾಯಶಃ ಇಲ್ಲ
ಕನಸಿರಬಹುದಿದು
ಪ್ರಾಯಶಃ ಎಲ್ಲಾ
ಸರಿ ಇರಬಹುದು
ಭಾಗಶಃ ಇಲ್ಲಾ
ಸೆರೆ ಇರಬಹುದಿದು
ಮೂಲತಃ
ಜೀವ ವಿಲಾ ವಿಲಾ
ಎನ್ನುತಲೇ
ಒಲವನು ಹುಡುಕುತಿದೆ
ಪ್ರಾಯಶಃ

ನಾವು ಬದುಕಿರಬಹುದು
ಪ್ರಾಯಶಃ ಇಲ್ಲ
ಕನಸಿರಬಹುದಿದು
ಪ್ರಾಯಶಃ…


ಕಂಗಳೇ ಇಲ್ಲದ
ಊರಲಿ ನಡೆದು….
ಕಂಗಳೇ ಇಲ್ಲದ
ಊರಲಿ ನಡೆದು….
ಕನ್ನಡಿ ಮಾರುವ
ಕೆಲಸವ ಹಿಡಿದು
ನಮ್ಮನು ನಾವೇ..
ನಮ್ಮನು ನಾವೇ..
ಕಾಣದೆ ಹೋಗಿ
ಎಲ್ಲಿಗೋ ಸಾಗಿ
ನಾವು ಯಾರಿರಬಹುದೆಂದು
ಹುಡುಕಲು ಬಯಸುವೆವು
ಪ್ರಾಯಶಃ…

ನಾವು ಬದುಕಿರಬಹುದು
ಪ್ರಾಯಶಃ ಇಲ್ಲ
ಕನಸಿರಬಹುದಿದು
ಪ್ರಾಯಶಃ….

ನಲಿವಿನ ಕ್ಷಣಗಳ
ಕಾಯುತ ಕುಳಿತು …
ನಲಿವಿನ ಕ್ಷಣಗಳ
ಕಾಯುತ ಕುಳಿತು …
ದಿನಗಳ ಕಳೆವೆವು
ನಗುವುದೇ ಮರೆತು
ನೆನ್ನೇಯ ಪಾಡು…
ನೆನ್ನೇಯ ಪಾಡು…
ಈ ದಿನಾ ಕಾಡಿ
ನಾಳೆಯೂ ಬಾಡಿ
ನಮ್ಮ ಸಂಕಟವನೇ ನಾವು
ಸಂತಸ ಎನ್ನುವೆವು
ಪ್ರಾಯಶಃ…

ನಾವು ಬದುಕಿರಬಹುದು
ಪ್ರಾಯಶಃ ಇಲ್ಲ
ಕನಸಿರಬಹುದಿದು
ಪ್ರಾಯಶಃ