Sagarika Song Lyrics - kalathva Siri Productions

 


Sagarika is a kannada musical film starring Raviraj Poojari & Rashmi Bhat. This Sagarika song sung by K P Milan and compossed by Somesh Satpathy and written by Manish Moyli.
About This Song
Track Name Sagarika
Album Sagarika Musical Film
Vocals K P Milan
Songwriter Manish Moyli
Music Somesh Satpathy
Music-Label Kalathva Productions

Sagarika Lyrics in Kannada

ಹೊಸದಾದಂತ ಕನಸು, ನನ್ನಲ್ಲೇ ಇರಿಸು...
ಜೊತೆಯಾಗಿ ಇಂದು ಎಂದು.
ಸವಿಯಾದಂತ ಮುನಿಸು ಜೀವಂತವಿರಿಸು 
ವಿಶೇಶವಾದ ನಗುವಿನೊಂದಿಗೆ.. 

ಹೊಸದಾದಂತ ಕನಸು, ನನ್ನಲ್ಲೇ ಇರಿಸು...
ಜೊತೆಯಾಗಿ ಇಂದು ಎಂದು.
ಸವಿಯಾದಂತ ಮುನಿಸು ಜೀವಂತವಿರಿಸು 
ವಿಶೇಶವಾದ ನಗುವಿನೊಂದಿಗೆ.. 

ನೀನಾದೆ ಪರಪಂಚ ನನಗೆ....
ಕಂಡಂತ ಕನಸೆಲ್ಲ ನಿನದೆ...
ಜೊತೆಗೂಡಿ ಕಳೆವಂತ ಘಳಿಗೆ.
ಹೊಸಬಣ್ಣ ಬಳಿದಂತೆ ಭುವಿಗೆ....
ನಿನ್ನೊಳಗೆ ನಾನಿರುವೆ,ಉಸಿರ ನೀಡಿ  ಜೊತೆಯಾಗುಬಾ.....

ಸತಾಯಿಸಿ,ನೀ ಕಾಡುವಾಗ,ಸಾಲು ಹಗಲ ಕನಸ ಕಂಡೆ ನಾ...
ವಿಚಾರಣೆ ಬೇಕಿಲ್ಲವೀಗ, ಪ್ರೀತಿಗಂತೂ ನೀನೆ ಕಾರಣ.


ಇರುಳಲ್ಲು ಬೆಳಕಾಗಿ ಇರುವೆ...
ಜೊತೆಯಾಗಿ ನೆರಳಂತೆ ನೆಡೆವೆ...
ನಿನ್ನಲ್ಲೇ ವಶವಾದೆ ಒಲವೇ...
ಹೀಗೇಕೆ ಬಿಡದಂತೆ ಸುಳಿವೇ..

ನಿನ್ನೊಳಗೆ ನಾನಿರುವೆ, ಉಸಿರ ನೀಡಿ ಜೊತೆಯಾಗು ಬಾ....

ಒಹ್ ಓ ಓ ಓ...
ಒಹ್ ಓ ಓ ಓ 

ಹೊಸ ತರ ನೀ ಕರೆವ ರಾಗ...
ನನ್ನೇ ನಾನು ಮರೆವಹಾಗಿದೆ...
ಸುಧಾರಿಸೊ ಮುದ್ದಾದ ಮಾತು
ಸನಿಹ ನಿಂತು ಹೇಳಬೇಕಿದೆ...

ನೋವಲ್ಲು ,ನಗುವಾಗಿ ಇರುವೆ...
ಹಾಯಾದ ನೆನಪಾಗಿ ಉಳಿವೆ..
ನೀ ಸಾಗಿ ಬರುವಂತ ಘಳಿಗೆ...
ಹಗುರಾದ ಸಂಕೋಚ ನನಗೆ..